ಕೋಟ್ಸ್, ರೋಜರ್
	1682-1716. ಇಂಗ್ಲೆಂಡಿನ ಗಣಿತಶಾಸ್ತ್ರಜÐ. ಜನಿಸಿದ್ದು ಲೆಸ್ಟರ್‍ಷೈರಿನಲ್ಲಿ. ಶಾಲೆಯಲ್ಲಿದ್ದಾಗಲೇ ಗಣಿತಶಾಸ್ತ್ರದ ಬಗ್ಗೆ ವಿಶೇಷಾಭಿರುಚಿಯನ್ನು ವ್ಯಕ್ತಪಡಿಸಿದ್ದರಿಂದ ಇವನ ಸೋದರಮಾವ ಜಾನ್ ಸ್ಮಿತ್ ಈತನ್ನು ತನ್ನ ಮನೆಗೆ ಕರೆದೊಯ್ದು ಅಲ್ಲಿ ಈತನ ಆಧ್ಯಯನ ಮುಂತಾದವುಗಳ ಮೇಲ್ವಿಚಾರಣೆಯನ್ನು ತಾನೇ ನೋಡಿಕೊಂಡ. ಲಂಡನ್ನಿನ ಸೇಂಟ್ ಪಾಲನ ಶಾಲೆಗೆ ಕೋಟ್ಸನನ್ನು ಸೇರಿಸಲಾಯಿತು. ಅಲ್ಲಿದ್ದ ಸಮಯದಲ್ಲಿ ಇವನು ಶ್ರೇಷ್ಠ ಗ್ರಂಥಗಳ ಅಧ್ಯಯನದಲ್ಲಿ ತೊಡಗಿ ಪತ್ರವ್ಯವಹಾರದ ಮೂಲಕ ತನ್ನ ಸೋದರಮಾವನೊಡನೆ ವಿಚಾರವಿನಿಮಯ ಮಾಡಿಕೊಳ್ಳುತ್ತಿದ್ದ, ಅನಂತರ ಟ್ರಿನಿಟಿ ಕಾಲೇಜಿನಲ್ಲಿ ಅಧ್ಯಯನ ಮಾಡಿ ಬಿ.ಎ. (1702) ಮತ್ತು ಎಂ.ಎ. (1706) ಪದವಿಗಳನ್ನು ಗಳಿಸಿದ. ಇವನಿಗೆ ಆ ಕಾಲೇಜಿನ ಫೆಲೋ ಗೌರವವೂ (1705) ರಾಯಲ್ ಸೊಸೈಟಿಯ ಫೆಲೋ ಗೌರವವೂ (1711) ಲಭಿಸಿದುವು. ಟ್ರಿನಿಟಿ ಕಾಲೇಜಿನ ಅಧ್ಯಾಪಕನಾಗಿದ್ದ ರಿಚರ್ಡ್ ಬೆಂಟ್ಲಿಯ ಶಿಫಾರಸಿನ ಮೇಲೆ ಕೇಂಬ್ರಿಜ್ ಕಾಲೇಜಿನಲ್ಲಿ ಖಗೋಳಶಾಸ್ತ್ರ ಮತ್ತು ನ್ಯಾಚುರಲ್ ಫಿಲಾಸಫಿಗಳ ಪ್ರಥಮ ಪ್ರಾಧ್ಯಾಪಕನ ಹುದ್ದೆ ಇವನಿಗೆ ದೊರಕಿತು. ಟ್ರಿನಿಟಿ ಕಾಲೇಜಿನಲ್ಲಿ ಒಂದು ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸುವ ಉದ್ದೇಶ ಈತನಿಗಿತ್ತು. ಇದರ ಸಲುವಾಗಿ ಬಹುಮಂದಿಯಿಂದ ಚಂದಾಹಣವನ್ನು ಸಂಗ್ರಹಮಾಡಿದ. ಇವನ ಜೀವಿತಕಾಲದಲ್ಲಿ ವೀಕ್ಷಣಾಲಯವನ್ನು ಸ್ಥಾಪಿಸುವ ಉದ್ದೇಶ ಈತನಿಗಿತ್ತು. ಇದರ ಸಲುವಾಗಿ ಬಹುಮಂದಿಯಿಂದ ಚಂದಾಹಣವನ್ನು ಸಂಗ್ರಹ ಮಾಡಿದ. ಇವನ ಜೀವಿತಕಾಲದಲ್ಲಿ ವೀಕ್ಷಣಾಲಯದ ನಿರ್ಮಾಣ ಪೂರ್ಣವಾಗಲಿಲ್ಲ. ಕೋಟ್ಸ್ ತನ್ನ ಜೀವನದ ಬಹುಪಾಲು ಸಮುಯವನ್ನು ಈ ವೀಕ್ಷಣಾಲಯದಲ್ಲೇ ತನ್ನ ಜೀವನದ ಬಹು ಪಾಲು ಸಮಯವನ್ನು ಈ ವೀಕ್ಷಣಾಲಯದಲ್ಲೇ ತನ್ನ ಸೋದರ ಮಾವನ ಮಗ ರಾಬರ್ಟ್ ಸ್ಮಿತನ ಜೊತೆಯಲ್ಲೇ ಕಳೆದ. 1797ರಲ್ಲಿ ಈ ಇದನ್ನು ಕೆಡವಲಾಯಿತು.

	ನ್ಯೂಟನ್ನನೊಡಗೂಡಿ ಕೋಟ್ಸ್ ಸೂರ್ಯನ ವೀಕ್ಷಣೆಯ ಸಂಬಂಧದಲ್ಲಿ ಗಡಿಯಾರದ ವಿಧಾನವನ್ನು ಅನುಸರಿಸಿ ಪರಿಭ್ರಮಣ ಕನ್ನಡಿಯಿರುವ ದೂರದರ್ಶಕದ (ಹೀಲಿಯೊ ಸ್ಟ್ಯಾಟ್ ಟೆಲಿಸ್ಕೋಪ್) ರೂಪರೇಖೆಗಳನ್ನು ಒದಗಿಸಿದ. ಫ್ಲೆಂಸ್ಟೀಡ್ ಮತ್ತು ಕಾಸೀನಿ ತಯಾರಿಸಿದ್ದ ಸೂತ್ಯ ಮತ್ತು ಗ್ರಹಚಲನೆಯನ್ನು ಕುರಿತಂಥ ಕೋಷ್ಟಕವನ್ನು ಪರಿಷ್ಕರಿಸಿದ. ನ್ಯೂಟನ್ನನ ತತ್ತ್ವಗಳನ್ನು ಆಧರಿಸಿದಂತೆ ಚಂದರನ ಚಲನೆಯನ್ನು ಕುರಿತಂಥ ಒಂದು ಕೋಷ್ಟಕವನ್ನು ನಿರ್ಮಿಸಬೇಕೆಂಬ ಬಯಕೆ ಈತನಿಗಿತ್ತು. 1715ರ ಏಪ್ರಿಲ್ 22ರಂದು ಸಂಭವಿಸಿದ ಪೂರ್ಣ ಸೂರ್ಯಗ್ರಹಣ ಸಂಕ್ರಾಮವನ್ನು (ಆಕ್ಕಲ್ಟೇಶನ್) ನೋಡಿದ. ವಿಲಿಯಂ ವ್ಹಿಸ್ಟನನ ಒಡಗೂಡಿ ಭೌತ ವಿಜಾÐನಗಳ ಶಾಲೆಯೊಂದನ್ನು ಈತ ಟ್ರಿನಿಟಿಯಲ್ಲಿ ಸ್ಥಾಪಿಸಿದ. ಅಲ್ಲಿ ವಿಜಾÐನ ವಿಷಯಗಳ ಮೇಲೆ ಅತ್ಯಾಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅಧ್ಯಯನ ನೆಡೆಸಲು ಅವಕಾಶವಿತ್ತು. ವ್ಹಿಸ್ಟನ್ ಮತ್ತು ಕೋಟ್ಸ್ ಈ ಶಾಲೆಯಲ್ಲಿ ನಡೆಸಿದಂಥ ಪ್ರಯೋಗಗಳ ವಿವರಗಳು ಕೋಟ್ಸನ ಮರಣಾನಂತರ ಪ್ರಕಟಗೊಂಡ (1738) ಗ್ರಂಥದಲ್ಲಿ (ಹೈಡ್ರೋಸ್ಟ್ಯಾಟಿಕಲ್ ಅಂಡ್ ನ್ಯುಮ್ಯಾಟಿಕಲ್ ಬೈರೋಜರ್ ಕೋಟ್ಸ್) ಕಾಣಸಿಗುತ್ತವೆ. ಆ ಕಾಲದಲ್ಲಿ ವಿದ್ಯಾರ್ಥಿಗಳಿಂದ ನೇರವಾಗಿ ಪ್ರಯೋಗಗಳನ್ನು ಮಾಡಿಸುವ ಪದ್ಧತಿ ಇರಲಿಲ್ಲವಾಗಿ ಇವರೇ ನಡೆಸುತ್ತಿದ್ದ ಪ್ರಯೋಗ ತರಗತಿಗಳು ಬಹು ಸರಳವಾಗಿಯೂ ನೇರವಿಧಾನವನ್ನನುಸರಿಸುವಂಥವೂ ಪ್ರಚೋದನೀಯವೂ ಪರಿಪೂರ್ಣವೂ ಆಗಿರುತ್ತಿದ್ದುವು.

	ಐಸಾಕ್ ನ್ಯೂಟನ್ ರಚಿಸಿದ ಪ್ರಿನ್ಸಿಪಿಯ ಗ್ರಂಥವನ್ನು ಹೊರತರುವಲ್ಲಿ ಕೋಟ್ಸ್ ಬಹುವಾಗಿ ಶ್ರಮಿಸಿದ್ದಾನೆ. ಪ್ರಿನ್ಸಿಪಿಯದ ಮೊದಲ ಆವೃತ್ತಿ 1687ರಲ್ಲಿ ಹೊರ ಬಂದಿದ್ದು ಆಗ ಕೇವಲ ಕೆಲವೇ ಪ್ರತಿಗಳು ಮಾತ್ರ ಅಚ್ಚಾಗಿದ್ದುವು. ಅದರ ಎರಡನೆಯ ಆವೃತ್ತಿಯನ್ನು ಇಬ್ಬರೂ ಸೇರಿ 3ಳಿವರ್ಷಗಳ ಅವಧಿಯಲ್ಲಿ ಹೊರ ತಂದರು. ಎರಡನೆಯ ಮುದ್ರಣಕ್ಕೆ ನ್ಯೂಟನ್ ಬರೆದ ಮುನ್ನುಡಿಯಲ್ಲಿ ಕೋಟ್ಸ ತನಗೆ ಮಾಡಿರುವ ಸಹಾಯವನ್ನು ಮನಸಾರ ಕೃತಜ್ಞತೆಯಿಂದ ಸ್ಮರಿಸಿದ್ದಾನೆ.

	ಕೋಟ್ಸನ ಬಹುಪಾಲಿನ ಕೆಲಸವೆಲ್ಲ ಗಣಿತಶಾಸ್ತ್ರದ ಬಗ್ಗೆಯೇ ಆಗಿದೆ. ಇವನ ಅಕಾಲ ಮರಣದಿಂದಾಗಿ (1716, ವಯಸ್ಸು ಕೇವಲ 34) ಬ್ರಿಟನ್ನಿನಲ್ಲಿ ಗಣಿತಶಾಸ್ತ್ರದ ಬೆಳೆವಣಿಗೆಗೆ ಪೆಟ್ಟು ಬಿತ್ತು. ಈ ಶಾಸ್ತ್ರದ ಮೇಲೆ ನ್ಯೂಟನ್ನನ ಅಧ್ಯಯನ ಸಂಶೋಧನಾವಿಧಾನಗಳನ್ನು ಅನುಸರಿಸಿದ ಕೆಲವೇ ಮಂದಿ ಗಣಿತಶಾಸ್ತ್ರ ಮೇಧಾವಿಗಳಲ್ಲಿ ಇವನೊಬ್ಬನೆಂದು ಹೊಗಳಲಾಗಿದೆ. 	   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ